ಕೊರಚ ಮೀನು

ಪಂಟಿಯಸ್ ಕೋಲಸ್ ಅಥವಾ ಬಾರ್ಬಸ್ ಕೋಲಸ್ ಎಂಬ ವೈಜ್ಞಾನಿಕ ಹೆಸರಿನ ಒಂದು ಎಲುಬು ಮೀನು. ಸಿಪ್ರಿನಿಫಾರ್ಮೀಸ್ ಗಣದಲ್ಲಿನ ಸ್ಕೈಪ್ರಿನಾಯಿಡೀ ಉಪಗಣದ ಸ್ಕೈಪ್ರಿನೀಡೆ ಕುಟುಂಬಕ್ಕೆ ಸೇರಿದೆ. ಇದೊಂದು ಸಿಹಿ ನೀರು ಮೀನು; ಭಾರತದ ಕೃಷ್ಣಾ, ತುಂಗಭದ್ರಾ, ಗೋದಾವರಿ ನದಿಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿದೆ. ಮಲಯದಲ್ಲೂ ಇದರ ವ್ಯಾಪ್ತಿ ಉಂಟು. ಕೊರಚ ಮೀನು ಸುಮಾರು ಒಂದು ಅಡಿಗೂ ಹೆಚ್ಚು ಉದ್ದ ಬೆಳೆಯುತ್ತದೆ. ಕಣ್ಣಿನ ಗೂಡಿನ ಮಧ್ಯೆ ಇರುವ ಮಟ್ಟಸವಾದ ಮೂಳೆ ದಾಡಿಗಳಂತಿರುವ ಎರಡು ಸ್ಪರ್ಶಾಂಗಗಳೂ ಹಾಗೂ ಪಾಶ್ರ್ವರೇಖೆಯಲ್ಲಿ 40-43 ಹುರುಪೆಗಳಿರುವುದೂ ಇದರ ಮುಖ್ಯ ಲಕ್ಷಣಗಳು. ದೇಹದ ಬಣ್ಣ ಹಳದಿ ಮಿಶ್ರಿತ ಬಿಳಿ. ಬೆನ್ನು, ಬಾಲ ಮತ್ತು ಗುದದ ಈಜು ರೆಕ್ಕೆಗಳ ತುದಿ ಬೂದುಬಣ್ಣಕ್ಕಿರುತ್ತದೆ.    (ಬಿ.ಹೆಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ